ಪಿಜನ್ ಬ್ರಾಂಡ್ ಅಡಿಯಲ್ಲಿ  ‘ಎಲೆಕ್ಟ್ರಾ’  ಹೆಸರಿನ ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್ ಪರಿಚಯಿಸುತ್ತಿರುವ ಸ್ಟವ್ಕ್ರಾಫ್ಟ್

ನಿಮ್ಮ  ಪಾಕಶಾಲೆಯ ಕೌಶಲ್ಯವನ್ನು ಅನ್ಲಾಕ್ ಮಾಡಿ, ಅಡುಗೆಮನೆಯನ್ನು ಅನುಕೂಲಕರವಾಗಿ ಪರಿವರ್ತಿಸಲಿರುವ ‘ಎಲೆಕ್ಟ್ರಾ’
sss
ಬೆಂಗಳೂರು, ಜೂನ್ 18, 2024: ಭಾರತದ ಪ್ರಮುಖ ಅಡುಗೆ ಸಲಕರಣೆಗಳ ತಯಾರಕ ಕಂಪನಿಯಾದ ಸ್ಟವ್ಕ್ರಾಫ್ಟ್ (Stovekraft), ತನ್ನ ಪಿಜನ್ ಬ್ರಾಂಡ್ನ ಅಡಿಯಲ್ಲಿ ಎಲೆಕ್ಟ್ರಿಕ್ ಪ್ರೆಶರ್ ಕುಕ್ಕಿಂಗ್ ವ್ಯವಸ್ಥೆಯನ್ನು ಬಿಡುಗಡೆ ಮಾಡುತ್ತಿದೆ. ಅದುವೇ ‘ಎಲೆಕ್ಟ್ರಾ’ (Electra).

ಜನರು ಸುರಕ್ಷಿತವಾಗಿ ಅಡುಗೆ ಮಾಡಲು ಹೆಚ್ಚು ಅನುಕೂಲಕರ ಮತ್ತು ಪರಿಣಾಮಕಾರಿಯಾಗಿರುವಂತೆ ಎಲೆಕ್ಟ್ರಾ ಎಂಬ ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಭಾರತೀಯ ಮನೆಗಳಲ್ಲಿನ ಅಡುಗೆಮನೆಯನ್ನು ಅನುಕೂಲಕರವಾಗಿ ಪರಿವರ್ತಿಸಲು ಹಾಗೂ ನಿಮ್ಮ ಪಾಕಶಾಲೆಯ ಕೌಶಲ್ಯವನ್ನು ಅನ್ಲಾಕ್ ಮಾಡಲು ಎಲೆಕ್ಟ್ರಾ ಸಹಕಾರಿಯಾಗಲಿದೆ.

ಎಲೆಕ್ಟ್ರಾ – ಎಲೆಕ್ಟ್ರಿಕ್ ಪ್ರೆಶರ್ ಕುಕ್ಕರ್ ಸಿಸ್ಟಮ್ ಗ್ರಾಹಕರ ಅಗತ್ಯಗಳನ್ನು ಪೂರೈಸುವ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗುತ್ತಿದೆ. ಇದು ಅಡುಗೆಯಲ್ಲಿ ಸ್ಥಿರತೆಯನ್ನು ಖಾತ್ರಿಗೊಳಿಸಿ ಪ್ರತಿ ಬಾರಿಯೂ ಪರಿಪೂರ್ಣ ಫಲಿತಾಂಶಗಳನ್ನು ಪಡೆಯಲು ನೆರವಾಗುತ್ತದೆ. ಎಲೆಕ್ಟ್ರಾದಲ್ಲಿ ‘ನೋ-ಮಾನಿಟರಿಂಗ್ ನೀಡೆಡ್ ಫಂಕ್ಷನಾಲಿಟಿ’ (No-Monitoring Needed Functionality) ಬಳಕೆದಾರರಿಗೆ ಏಕಕಾಲದಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡಲು ಅನುಮತಿಸುತ್ತದೆ. ಹಾಗೆಯೇ ಇದರಲ್ಲಿನ ‘ಆಟೋ-ಆಫ್ ಫೀಚರ್’ (Auto-Off Feature) ನಿಮ್ಮ ಸುರಕ್ಷತೆಯನ್ನು ಹೆಚ್ಚಿಸುತ್ತದೆ. 

ಇದಲ್ಲದೇ ಇದು ವಿಸಲ್ / ಶಿಳ್ಳೆ ಶಬ್ದವಿಲ್ಲದೇ ಈ ಕುಕ್ಕರ್ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇಲ್ಲಿ ಸಾಂಪ್ರದಾಯಿಕ ಪ್ರೆಶರ್ ಕುಕ್ಕರ್ನಂತೆ ಯಾವುದೇ ಅಡಚಣೆ ಇರುವುದಿಲ್ಲ. ಎಲೆಕ್ಟ್ರಾ ಕುಕ್ಕರ್ನಲ್ಲಿ ‘ಡಿಲೇ ಫಂಕ್ಷನ್’ (Delay Function) ಆಯ್ಕೆಯಿದ್ದು, ಇದು ಬಳಕೆದಾರರಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಡುಗೆಯನ್ನು ಸಿದ್ಧಪಡಿಸಲು ಅನುಮತಿಸುತ್ತದೆ. ಹಾಗಂತ ಆಹಾರದ ತಾಜಾತನದಲ್ಲಾಗಲಿ ಅಥವಾ ಪರಿಮಳದಲ್ಲಾಗಲಿ ಯಾವುದೇ ಬದಲಾವಣೆ ಇರುವುದಿಲ್ಲ.

‘ಕೀಪ್ ವಾರ್ಮ್’ (Keep Warm) ಮೋಡ್ ಎಂಬ ಹೆಚ್ಚುವರಿ ಆಯ್ಕೆ ಕೂಡ ಇದ್ದು, ನೀವು ಆಹಾರವನ್ನು ಬಡಿಸುವ ವರೆಗೂ ಅಡುಗೆ ಬೆಚ್ಚಗೆ ಇರುವಂತೆ ನೋಡಿಕೊಳ್ಳುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳ ಮೂಲಕ ಎಲೆಕ್ಟ್ರಾ ಕುಕ್ಕರ್ ನಿಮ್ಮ ಕುಟುಂಬಕ್ಕೆ ರುಚಿಕರವಾದ ಮತ್ತು ಪೌಷ್ಟಿಕಾಂಶಭರಿತ ಊಟವನ್ನು ತಯಾರಿಸುವಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಉಳಿಸುವ ವಿಶ್ವಾಸಾರ್ಹ ಮತ್ತು ಅನುಕೂಲಕರವಾದ ಅಡುಗೆ ಸಾಧನವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಎಲೆಕ್ಟ್ರಾ ಬಿಡುಗಡೆಯ ಬಗ್ಗೆ ಮತ್ತು ಅಡುಗೆಮನೆಯ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಸ್ಟವ್ಕ್ರಾಫ್ಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಂದ್ರ ಗಾಂಧಿಯವರು, “ಎಲೆಕ್ಟ್ರಾ ಬಿಡುಗಡೆಯೊಂದಿಗೆ, ನಾವು ಅಡುಗೆಮನೆಯ ನಾವೀನ್ಯತೆಯಲ್ಲಿ ಹೊಸ ಮಾನದಂಡವನ್ನು ಹೊಂದಿಸುತ್ತಿದ್ದೇವೆ. ಈ ಅತ್ಯಾಧುನಿಕ ಉಪಕರಣವು ಕೇವಲ ಗ್ರಾಹಕರ ಅನುಕೂಲಕ್ಕಾಗಿ ಮಾತ್ರವೇ ಕಾರ್ಯನಿರ್ವಹಿಸುವುದಿಲ್ಲ, ಇದರ ಜೊತೆಯಲ್ಲಿ ಭಾರತೀಯ ಮನೆಗಳಲ್ಲಿನ ಪಾಕಶಾಲೆಯ ಚಿತ್ರಣವನ್ನೇ ಪರಿವರ್ತಿಸಲು ಸಹಕಾರಿಯಾಗಿದೆ. ಎಲೆಕ್ಟ್ರಾ ಕುಕ್ಕರ್ ನಮ್ಮ ಪಟ್ಟುಬಿಡದ ಅನ್ವೇಷಣೆಯನ್ನು ಪ್ರತಿನಿಧಿಸುತ್ತದೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರಿಗೆ ಅವರ ಅಡುಗೆ ಅನುಭವವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುವ ನಮ್ಮ ಬದ್ಧತೆಯನ್ನು ಸಾರುತ್ತದೆ” ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. 

ಎಲೆಕ್ಟ್ರಾ ಬಗ್ಗೆ ಮಾತನಾಡಿರುವ ಸ್ಟವ್ಕ್ರಾಫ್ಟ್ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಡಾ ನಂದ ಅವರು, “ಎಲೆಕ್ಟ್ರಾ ಕುಕ್ಕರ್ ಕೇವಲ ಒಂದು ಉತ್ಪನ್ನವಲ್ಲ, ಅದಕ್ಕಿಂತಲೂ ಹೆಚ್ಚು. ಇದು ಅಡುಗೆ ತಂತ್ರಜ್ಞಾನದಲ್ಲಿನ ಒಂದು ಅಮೋಘ ಬದಲಾವಣೆಯಾಗಿದೆ. ಬಹುಮುಖ ಕಾರ್ಯನಿರ್ವಹಣೆಯೊಂದಿಗೆ ಅಭೂತಪೂರ್ವ ಅನುಕೂಲತೆಯನ್ನು ಒದಗಿಸುವ ಮೂಲಕ, ಎಲೆಕ್ಟ್ರಾ ಮನೆ ಅಡುಗೆಯ ಮೌಲ್ಯವನ್ನು ಹೆಚ್ಚಿಸುತ್ತದೆ.  ಈ ನಾವೀನ್ಯತೆ ಬಳಕೆದಾರರಿಗೆ ಅವರ ಪಾಕಶಾಲೆಯ ಸಾಮರ್ಥ್ಯವನ್ನು ಅನ್ವೇಷಿಸಲು ಮತ್ತು ಮನೆಯಲ್ಲೇ ರುಚಿಕರವಾದ ಊಟವನ್ನು ಸಲೀಸಾಗಿ ತಯಾರಿಸಲು ಪ್ರೇರೇಪಿಸುತ್ತದೆ ಎಂಬುದರಲ್ಲಿ ನಮಗೆ ವಿಶ್ವಾಸವಿದೆ” ಎಂದು ಹೇಳಿದ್ದಾರೆ.

ಪ್ರೆಶರ್ ಕುಕ್ಕಿಂಗ್, ಸ್ಲೋ ಕುಕ್ಕಿಂಗ್, ಸ್ಟೀಮಿಂಗ್, ಸಾಟಿಯಿಂಗ್ ಮತ್ತು ಬೇಕಿಂಗ್ ಸೇರಿದಂತೆ ವಿವಿಧ ರೀತಿಯ ಅಡುಗೆ ವಿಧಾನಗಳನ್ನು ಅನುಸರಿಸಲು ಎಲೆಕ್ಟ್ರಾ ಅನುವು ಮಾಡಿಕೊಡುತ್ತದೆ. ಸ್ಟ್ಯೂಗಳಿಂದ ಹಿಡಿದು ಸಿಹಿತಿಂಡಿಗಳವರೆಗೆ ವೈವಿಧ್ಯಮಯ ಭಕ್ಷ್ಯಗಳನ್ನು ತಯಾರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಇದರಲ್ಲಿರುವ ಸ್ಮಾರ್ಟ್ ಟಚ್ ಇಂಟರ್ಫೇಸ್ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಈ ಫೀಚರ್,  ತಾಪಮಾನ ಹೊಂದಿಸುವುದು ಮತ್ತು ಪ್ರೆಶರ್ ಮಟ್ಟವನ್ನು ಸರಿಹೊಂದಿಸುವುದು ಸೇರಿದಂತೆ ಕುಕ್ಕಿಂಗ್ ಸಂಬಂಧಿತ ಸೆಟ್ಟಿಂಗ್ಗಳನ್ನು ಸೆಲೆಕ್ಟ್ ಮಾಡಲು ಸಹಾಯಕವಾಗಿದೆ. ಅಡುಗೆಯ ಹಂತವನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ. ಅಡುಗೆ ಮಾಡುವ ಅನುಭವ ಇಲ್ಲದವರೂ ಕೂಡ ಆತ್ಮವಿಶ್ವಾಸದಿಂದ ಎಲೆಕ್ಟ್ರಾ ಕುಕ್ಕರ್ ಬಳಸಿ ಬಾಣಸಿಗರಂತೆ ಅಡುಗೆ ಮಾಡಬಹುದಾಗಿದೆ.

ಸ್ಟವ್ಕ್ರಾಫ್ಟ್ ಲಿಮಿಟೆಡ್
ಸ್ಟವ್ಕ್ರಾಫ್ಟ್ ಲಿಮಿಟೆಡ್ (ಎನ್ಎಸ್ಇ/ಬಿಎಸ್ಇ: ಸ್ಟವ್ಕ್ರಾಫ್ಟ್), ಇದು ರಾಜೇಂದ್ರ ಜೆ ಗಾಂಧಿಯವರು ಸ್ಥಾಪಿಸಿದ ಭಾರತದ ಪ್ರಮುಖ ಅಡುಗೆ ಸಲಕರಣೆಗಳ ಕಂಪನಿಯಾಗಿದೆ. 1994 ರಲ್ಲಿ ಕೆರೋಸಿನ್ ವಿಕ್ ಸ್ಟೌವ್ಗಳಿಂದ ಆರಂಭವಾದ ಕಂಪನಿಯು ಇದೀಗ ಪಿಜನ್, ಗಿಲ್ಮಾ,  ಬ್ಲ್ಯಾಕ್ & ಡೆಕ್ಕರ್ ಮತ್ತು ಪಿಜನ್ ಎಲ್ಇಡಿ ಬ್ರ್ಯಾಂಡ್ಗಳ ಅಡಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದೆ. ವಾರ್ಷಿಕವಾಗಿ 1000 ಕೋಟಿ ರೂಪಾಯಿಗೂ ಹೆಚ್ಚಿಗೆ ವಹಿವಾಟು ನಡೆಸುವ ಸ್ಟವ್ಕ್ರಾಫ್ಟ್, 600 ವಿತರಕರು, 75,000 ಕ್ಕೂ ಹೆಚ್ಚು ರಿಟೇಲ್ ಟಚ್ಪಾಯಿಂಟ್ಗಳು, 150 ಕಂಪನಿ-ಮಾಲೀಕತ್ವದ ಪಿಜನ್ ಎಕ್ಸ್ಕ್ಲೂಸಿವ್ ರಿಟೇಲ್ ಸ್ಟೋರ್ಗಳು ಮತ್ತು 60 ಎಕ್ಸ್ಕ್ಲೂಸಿವ್ GILMA ಸ್ಟೋರ್ಗಳ ಮೂಲಕ ರಾಷ್ಟ್ರವನ್ನು ವ್ಯಾಪಿಸಿದೆ. ಸ್ಟವ್ಕ್ರಾಫ್ಟ್ನ ಯುಎಸ್ಎ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಸೇರಿದಂತೆ 14 ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ವಾಲ್ಮಾರ್ಟ್ ಮತ್ತು ಬಿಗ್ ಲಾಟ್ಸ್ನಂತಹ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.

ಸ್ಟವ್ಕ್ರಾಫ್ಟ್ ಬೆಂಗಳೂರಿನ ಸಮೀಪದಲ್ಲಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಡುಗೆ ಉಪಕರಣಗಳ ತಯಾರಿಕೆಯ ಅತಿದೊಡ್ಡ ಕಾರ್ಖಾನೆಯನ್ನು ಹೊಂದಿದ್ದು, ಎರಡನೇ ಉತ್ಪಾದನಾ ಘಟಕವು ಹಿಮಾಚಲ ಪ್ರದೇಶದ ಬದ್ದಿ ಎಂಬ ಪ್ರದೇಶದಲ್ಲಿದೆ.

Leave a comment

Start a Blog at WordPress.com.

Up ↑